ತಲೆಯಿಲ್ಲದ ನೋಟ್ ಬ್ಯಾನ್ ಜಾರಿಯಾಗಿ ಇಂದಿಗೆ ಮೂರು ವರ್ಷ– ಇನ್ನೂಕೋಮಾದಲ್ಲೇ ಇರುವ ಆರ್ಥಿಕತೆ!

ಬೆಂಗಳೂರು ರಾಜಕೀಯ ರಾಜ್ಯ ರಾಷ್ಟ್ರೀಯ

ಪ್ರಧಾನಿ ಮೋದಿ ನಿರ್ಮಿತ ಆರ್ಥಿಕ ದುರಂತಕ್ಕೆ ಇಂದಿಗೆ ಮೂರು ವರ್ಷಗಳಾಗಿವೆ. ನೋಟ್ ಬ್ಯಾನ್ ಮಾಡುವುದರ ಮೂಲಕ ಕಪ್ಪು ಹಣಕ್ಕೆ ಕಡಿವಾಣ,  ಭಯೋತ್ಪಾದನೆ ನಿರ್ಮೂಲನೆ , ಖೋಟಾ ನೋಟು ನಿರ್ಮೂಲನೆ ಹಾಗೂ ಭ್ರಷ್ಟಾಚಾರ ನಿಗ್ರಹವಾಗುತ್ತದೆ ಎಂದು ಹೇಳಿ ರಾತ್ರೋ ರಾತ್ರಿ ಪ್ರಧಾನಿಯವರು ನೋಟ್ ಬ್ಯಾನ್ ಯೋಜನೆಯನ್ನು ಜಾರಿಗೊಳಿಸಿದರು.

Image may contain: 4 people

ಮಾಧ್ಯಮಗಳೂ ಸಹ ನೋಟಿನಲ್ಲಿ ನ್ಯಾನೋಚಿಪ್ಪನ್ನು ಅಳವಡಿಸಲಾಗಿದ್ದು ಅದರಿಂದ ಕಪ್ಪು ಹಣ ಭೂಮಿಯ ಆಳದದಲ್ಲಿದ್ದರೂ ಸಹ ಕಂಡು ಹಿಡಿಯಬಹುದು ಎಂದು ಹೇಳಿದರು. ಇನ್ನು ಕೆಲವು ಮಾಧ್ಯಮಗಳು ಇದನ್ನು ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸಿದರು. ಆದರೆ ಈ ಯೋಜನೆ ಜಾರಿಯಾಗಿ ಮೂರು ವರ್ಷಗಳಾದರೂ ಸಹ ಇಂದಿಗೂ ಸಹ ನೋಟ್ ಬ್ಯಾನ್ ದುಷ್ಪರಿಣಾಮವನ್ನು ಭಾರತದ ಮಾರುಕಟ್ಟೆ ವಲಯವು ಅನುಭವಿಸುತ್ತಿದ್ದು ಸಣ್ಣ & ಮಧ್ಯಮ ವ್ಯಾಪಾರಿಗಳ ಪರಿಸ್ಥಿತಿಯು ತೀರಾ ಚಿಂತಾಜನಕವಾಗಿದೆ.

ಈಗಾಗಲೇ ಭಾರತದ ಜಿಡಿಪಿ ದರವು ವಾಸ್ತವದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮಟ್ಟಕ್ಕೆ ಇಳಿಯುತ್ತಿದ್ದು ಈ ಬಗ್ಗೆ ನೋಟ್ ಬ್ಯಾನ್ ಅನ್ನು ಹೊಗಳಿದ ಯಾರೂ ಸಹ ಬಾಯಿ ಬಿಡುತ್ತಿಲ್ಲ. ನೋಟಿನಲ್ಲಿ ಚಿಪ್ಪು ಇದೆ ಎಂದು ಹೇಳಿದ ಪಬ್ಲಿಕ್ ಟಿವಿ ರಂಗನಾಥ್ ಆಗಲೀ ಅತನ ಚಾನಲ್ ಗೆ ಬಂದಿದ್ದ ಆರ್ಥಿಕ ತಜ್ಞರಾಗಲೀ ಬಾಯಿ ಬಿಡುತ್ತಿಲ್ಲ.

Image result for chakravarthy sulibele on note ban

ಇನ್ನೂ ಬಾಯಿಗೆ ಬಂದಂತೆ ಅವೈಜ್ಞಾನಿಕವಾಗಿ ನೋಟ್ ಬ್ಯಾನ್ ಅನ್ನು ಸಮರ್ಥಿಸಿಕೊಂಡಿದ್ದ ಚಕ್ರವರ್ತಿ ಸೂಲಿಬೆಲೆಗೂ ಕೂಡಾ ಆರ್ಥಿಕತೆಯ ಮೇಲೆ ಉಂಟಾದ ದುಷ್ಪರಿಣಾಮವನ್ನು ಸರಿಪಡಿಸಲು ಆಗುತ್ತಿಲ್ಲ. ಈಗಲೂ ಸಹ ನೋಟು ಅಮಾನೀಕರಣದ ನಂತರ ಆಗಿರುವ ಅನಾಹುತಗಳನ್ನು ಗಮನಿಸಿದರೆ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಹೂಡಿಕೆ-ಬೇಡಿಕೆ ಕುಸಿದು ಹೋಗಿದೆ. ಕೋಟ್ಯಂತರ ಉದ್ಯೋಗಗಳು ನಷ್ಟವಾಗಿವೆ. ಕಾರ್ಖಾನೆಗಳು ಮುಚ್ಚುತ್ತಿವೆ. ರೈತರು ಮತ್ತು ಕಾರ್ಮಿಕರ ಸ್ಥಿತಿ ಹದಗೆಟ್ಟಿದ್ದು ಭಾರತ ಆಂತರಿಕತೆಗೆ ದೊಡ್ಡ ಧಕ್ಕೆಯಾಗಿದೆ.

ಇಂತಹ ರಾಕ್ಷಸೀ ಮನಸ್ಥಿತಿಯ ನೋಟ್ ಬ್ಯಾನ್ ಗೆ ಇದೀಗ 3 ವರ್ಷ !

Please follow and like us:

Leave a Reply

Your email address will not be published. Required fields are marked *