ಮೋದಿ ಸರ್ಕಾರದಿಂದ ವಿದೇಶಿ ಹಿಂದೂಗಳಿಗೆ ರಕ್ಷಣೆ ಎಂಬುದೆಲ್ಲಾ ಸುಳ್ಳು – ಡಿಟೆನ್ಷನ್ ಕ್ಯಾಂಪ್ ನಲ್ಲಿ ಈವರೆಗೂ ಸತ್ತವರ ಸಂಖ್ಯೆ 29!

ರಾಜಕೀಯ ರಾಷ್ಟ್ರೀಯ

ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಬಂಧಿತನಾಗಿದ್ದ ಮತ್ತು 35 ವರ್ಷಗಳಿಂದ ಭಾರದಲ್ಲೇ ಬದುಕುತ್ತಿದ್ದ ಬಾಂಗ್ಲಾದೇಶದ ನರೇಶ್ ಕೋಂಚ್ ಇಂದು ಅಸ್ಸಾಂನ ಡಿಟೆನ್ಷನ್ ಸೆಂಟರ್ ನಲ್ಲಿ ಜೀವ ತೆತ್ತಿದ್ದಾನೆ. ಹೀಗೆ ಇಲ್ಲಿಯವರೆಗೆ 28 ಮಂದಿ ಪ್ರಾಣ ಕಳೆದುಕೊಂಡಿದ್ದು ಈತ 29 ನೇ ವ್ಯಕ್ತಿ. ಹೊರದೇಶದಿಂದ ಬಂದ ಹಿಂದೂಗಳಿಗೆ ಪೌರತ್ವ ಕೊಡ್ತೀವಿ ರಕ್ಷಣೆ ಕೊಡ್ತೀವಿ ಅನ್ನುತ್ತಿರುವಾಗಲೇ ಇತ್ತ ಡಿಟೆನ್ಷನ್ ಸೆಂಟರುಗಳೊಳಗೆ ಜೀವ ಹೋಗುತ್ತಿದೆ. ಒಟ್ಟಿನಲ್ಲಿ ಹಿಂದೂಗಳಿಗೆ ರಕ್ಷಣೆ ಎಂಬುದು ಇವರು ಸೃಷ್ಟಿಸಿರುವ ಭ್ರಮೆಯಾಗಿದ್ದು ಇತ್ತ ಒಂದಾದ ಮೇಲೊಂದರಂತೆ ಸಾವು.

Image result for detention camps assam

1964 ರಲ್ಲಿ ಬಾಂಗ್ಲಾದಿಂದ ಮೇಘಾಲಯಕ್ಕೆ ಬಂದಿದ್ದ ನರೇಶ್ ಕೊಂಚ್ ಎಂಬ ವ್ಯಕ್ತಿಯೊಬ್ಬ ಟಿನಿಕುನಿಯಾ ಎಂಬ ಗ್ರಾಮದಲ್ಲಿ 35 ವರ್ಷಗಳಿಂದ ವಾಸವಾಗಿದ್ದನು. 2018 ರ ವರೆಗೆ ಭಾರತದ ಚುನಾವಣೆಗಳಲ್ಲಿ ಭಾಗವಹಿಸಿದ್ದ ಈತನು ಮತವನ್ನೂ ಚಲಾಯಿಸಿದ್ದ. ಅದರೆ  ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಆತನನ್ನು ಡಿಟೆನ್ಷನ್ ಕ್ಯಾಂಪ್ ನಲ್ಲಿ ಹಾಕಲಾಗಿದ್ದು ಇದೀಗ ಈತ ಸರಿಯಾದ ಆರೈಕೆಯಿಲ್ಲದೇ ಸಾವನ್ನಪ್ಪಿದ್ದಾನೆ.

ಇನ್ನು ವಿದೇಶದ ಹಿಂದೂಗಳಿಗೆ ರಕ್ಷಣೆ ನೀಡಿ ಅವರಿಗೆ ಪೌರತ್ವ ನೀಡುವುದಾಗಿ ಘೋಷಿಸಿದ್ದ ಬಿಜೆಪಿಗರು ಇದೀಗ ತಾವು ಹೇಳುತ್ತಿರುವುದು ಸುಳ್ಳು ಎಂಬುದನ್ನು ಸಾಬೀತುಪಡಿಸಿದ್ದು ಇಲ್ಲಿದ್ದ ಬೆರಳಿಕೆ ಮಂದಿಗೂ ಸಹ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದು ತಾವು ಹೇಳುತ್ತಿರುವುದೆಲ್ಲಾ ಈ ಹಿಂದಿನಂತೆಯೇ ಸುಳ್ಳು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ

Image result for amit shah nrc

ಇನ್ನು ಮಾಡುವ ಕೆಲಸ ಮಾಡುವುದನ್ನು ಬಿಟ್ಟು ಈಗಲೂ ಹಿಂದೂ ಮುಸ್ಲಿಂ ಹೆಸರಿನಡಿ ಅಮಾನವೀಯ ಕೂಪದಲ್ಲಿ ಮನುಷ್ಯರನ್ನು  ಹಿಂಸಿಸುವ ಪ್ರವೃತ್ತಿಯನ್ನು ಜಾರಿಯಲ್ಲಿಟ್ಟುರುವ ಸರ್ಕಾರವು ತನ್ನ ಜವಾಬ್ದಾರಿ ರಹಿತವಾಗಿ ವರ್ತಿಸುತ್ತಿದೆ.

Please follow and like us:

Leave a Reply

Your email address will not be published. Required fields are marked *