ರಾಷ್ಟ್ರೀಯ

ಆರ್ ಎಸ್ ಎಸ್ ಸಂಘಟನೆಗೆ ದಲಿತ ಮುಖ್ಯಸ್ಥರು ಬರುವುದು ಯಾವಾಗ ?

ಹಿಂದೂ ನಾವೆಲ್ಲಾ ಒಂದು, ನಾವೆಲ್ಲಾ ಭಾರತೀಯರು ಎನ್ನುವುದು ಆರ್ ಎಸ್ ಎಸ್ ನ ಧ್ಯೇಯ ವಾಕ್ಯಗಳಲ್ಲಿ ಒಂದು. ಇದೇ ಮಾತಿನಡಿಯಲ್ಲಿ ನಾವು ಭಾರತೀಯರೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಆರ್ ಎಸ್ ಎಸ್ ನವರು ಹಲವು ಬಾರಿ ಹೇಳಿದ್ದಾರೆ. ಅದರಲ್ಲೂ ಹಿಂದೂ ಧರ್ಮವನ್ನು ಅತ್ಯಂತಿಕವಾಗಿ ಪ್ರತಿಪಾದಿಸುವ ಇವರು ಇಲ್ಲಿಯವರೆಗೂ ಐತಿಹಾಸಿಕವಾಗಿ ಶೋಷಣೆಗೆ ಒಳಪಟ್ಟ ಸಮುದಾಯಗಳ ಪ್ರತಿನಿಧಿಗಳನ್ನು ತಮ್ಮ ಸಂಘಟನೆಯ ಒಳಗೆ ಅಧಿಕೃತವಾಗಿ ಸೇರಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಹೀಗಿರುವಾಗ ಮುಖ್ಯಸ್ಥರನ್ನು ಮಾಡುವ ಪ್ರಶ್ನೆಯು ಬಹು ದೂರವೇ ಉಳಿಯಿತು ಎಂದರೂ ಸಹ ತಪ್ಪಾಗಲಾರದು. […]

ಬೆಂಗಳೂರು

ಸಿದ್ದರಾಮಯ್ಯನವರನ್ನು ದೇವರಾಜ ಅರಸು ಅವರೊಂದಿಗೆ ಮಾಡುವ ತಪ್ಪಾದ ಹೋಲಿಕೆ & ಸಂದರ್ಭ !

ನಾವು ಬಹಳಷ್ಟು ಸಲ ಗಮನಿಸಿದ್ದೇವೆ. ದೇವರಾಜ ಅರಸು ಅವರ ನಂತರದಲ್ಲಿ 5 ವರ್ಷಗಳ ಪೂರ್ಣಾವಧಿ ಆಡಳಿತ ನೀಡಿದಂತಹ ಸಿದ್ದರಾಮಯ್ಯನವರನ್ನು ಕರ್ನಾಟಕದ ಅಹಿಂದ ವರ್ಗಗಳ ಅಭಿವೃದ್ಧಿಯ ಹರಿಕಾರ & ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಆದರೆ ಬಹಳಷ್ಟು ಜನರು ಭಾವನಾತ್ಮಕವಾಗಿ ಮಾತನಾಡುವ ಭರದಲ್ಲಿ ಅರಸು & ಸಿದ್ದರಾಮಯ್ಯನವರನ್ನು ತಪ್ಪಾಗಿ ಸಮೀಕರಿಸುತ್ತಾರೆ. ಇಬ್ಬರ ನಡುವಣ ಕಾಲಾಂತರದ ವ್ಯತ್ಯಾಸಗಳು ಬಹಳಷ್ಟು ಇದ್ದರೂ ಸಹ ಅದ್ಯಾವುದನ್ನೂ ಸಹ ಗಮನಕ್ಕೆ ತೆಗೆದುಕೊಳ್ಳದೇ ಮಾಡುವ ಸಮೀಕರಣವು ಅರ್ಥವಿಲ್ಲದಂತಹ ಸಂಗತಿಯಾಗಿದೆ. 1972 ರಿಂದ […]

ತಲೆಯಿಲ್ಲದ ನೋಟ್ ಬ್ಯಾನ್ ಜಾರಿಯಾಗಿ ಇಂದಿಗೆ ಮೂರು ವರ್ಷ– ಇನ್ನೂಕೋಮಾದಲ್ಲೇ ಇರುವ ಆರ್ಥಿಕತೆ!

ಪ್ರಧಾನಿ ಮೋದಿ ನಿರ್ಮಿತ ಆರ್ಥಿಕ ದುರಂತಕ್ಕೆ ಇಂದಿಗೆ ಮೂರು ವರ್ಷಗಳಾಗಿವೆ. ನೋಟ್ ಬ್ಯಾನ್ ಮಾಡುವುದರ ಮೂಲಕ ಕಪ್ಪು ಹಣಕ್ಕೆ ಕಡಿವಾಣ,  ಭಯೋತ್ಪಾದನೆ ನಿರ್ಮೂಲನೆ , ಖೋಟಾ ನೋಟು ನಿರ್ಮೂಲನೆ ಹಾಗೂ ಭ್ರಷ್ಟಾಚಾರ ನಿಗ್ರಹವಾಗುತ್ತದೆ ಎಂದು ಹೇಳಿ ರಾತ್ರೋ ರಾತ್ರಿ ಪ್ರಧಾನಿಯವರು ನೋಟ್ ಬ್ಯಾನ್ ಯೋಜನೆಯನ್ನು ಜಾರಿಗೊಳಿಸಿದರು. ಮಾಧ್ಯಮಗಳೂ ಸಹ ನೋಟಿನಲ್ಲಿ ನ್ಯಾನೋಚಿಪ್ಪನ್ನು ಅಳವಡಿಸಲಾಗಿದ್ದು ಅದರಿಂದ ಕಪ್ಪು ಹಣ ಭೂಮಿಯ ಆಳದದಲ್ಲಿದ್ದರೂ ಸಹ ಕಂಡು ಹಿಡಿಯಬಹುದು ಎಂದು ಹೇಳಿದರು. ಇನ್ನು ಕೆಲವು ಮಾಧ್ಯಮಗಳು ಇದನ್ನು ಮಾಸ್ಟರ್ ಸ್ಟ್ರೋಕ್ ಎಂದು […]

Recent Post

Please follow & like us :)

Facebook
GOOGLE
Twitter
YouTube
INSTAGRAM